Tuesday, June 21, 2011

ತುಳುನಾಡ ಮಂಜುನಾಥನ ಮುಂದೆ ರಾಜ್ಯದ ನಾಯಕರು



ಮಾತುಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ ಎಂಬ ಮಾತು ಪ್ರಚಲಿತದಲ್ಲಿದೆ. ತುಳುವರ ಪಾಲಿಗಂತೂ ಇದು ಪರಮ ಸತ್ಯವಾದ ಮಾತಾಗಿದೆ. ದೇವರನ್ನು ನಂಬುವ ಪ್ರತಿಯೊಬ್ಬರ ಮನೆಯಲ್ಲೂ ತಿರುಪತಿಯ `ದೇವೆರೆ ಗಂಟ್ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕುಟುಂಬದ ಸದಸ್ಯರೊಳಗೆ ಎಂದಿಗೂ ಮಂಜುನಾಥನ ಅಥವಾ ಆತನ ಸನ್ನಿಧಿಯಾದ ಧರ್ಮಸ್ಥಳದ ಹೆಸರೆತ್ತಿ ಮಾತು ಹೇಳಬಾರದು ಎಂಬ ನಿಯಮವಿದೆ. ಹಾಗೊಂದು ಮಾತು ಬಂದು ಬಿಟ್ಟರೆ ಅಂದಿನಿಂದ ಆ ಮಾತಿನ ಇತ್ಯರ್ಥವಾಗುವವರೆಗೆ ಮಾತು ಯಾರು ಹೇಳಿದರೋ ಮತ್ತು ಯಾರ ಕುರಿತಾಗಿ ಹೇಳಿದರೋ ಅವರೊಂದಿಗಿನ ಸಂಬಂಧಕ್ಕೆ ತಡೆಯಾಗುತ್ತದೆ. ಈ ಎರಡು ವ್ಯಕ್ತಿಗಳ ಅಥವಾ ಕುಟುಂಬಗಳ ನಡುವೆ `ನುಪ್ಪು ನೀರ್ ಬಂದ್ ಆಗಿಬಿಡುತ್ತದೆ. ಪರಸ್ಪರ ಒಂದೇ ಪಂಕ್ತಿಯಲ್ಲಿ ಇವರು ಕುಳಿತು ಊಟ ಮಾಡುವಂತಿಲ್ಲ. ಒಬ್ಬರು ಇನ್ನೊಬ್ಬ ಮನೆಯ ಅನ್ನ ನೀರು ಮುಟ್ಟುವಂತೆಯೇ ಇಲ್ಲ.
ಹೆಚ್ಚಾಗಿ ಆಸ್ತಿ, ಭೂಮಿ, ಬೆಳೆ, ಫಲಗಳ ವಿಚಾದಲ್ಲಿ ಇಂತಹಾ ಆಜ-ಸೂಲಗಳನ್ನು ತುಳುವರು ಹಾಕಿಕೊಳ್ಳುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅಪವಾದವನ್ನು ಹಾಕಿದಾಗ ಅದು ಸುಳ್ಳು ಅಪವಾದವಾಗಿದ್ದರೆ ಅಪವಾದಕ್ಕೊಳಗಾದವನು ಮನನೊಂದು ಈ ಜಾಗದ ಹೆಸರು ಎತ್ತಿದರೆ ಸಾಕು ಅದೊಂದು `ಆಜ' ವಾಗಿಬಿಡುತ್ತದೆ. ಈ ಕಾರಣದಿಂದಾಗಿ ಕುಟುಂಬಗಳು ಒಡೆದು ಹೋಗುತ್ತವೆ. ಕೆಲವು ಹಿರಿಯರು ಮಾಡಿಕೊಂಡ ಇಂತಹಾ ಆಜ - ಸೂಲಗಳಿಂದ ಅವರ ನಂತರದ ತಲೆಮಾರುಗಳು ಕಷ್ಟ ನಷ್ಟವನ್ನು ಅನುಭವಿಸುತ್ತಾರೆ. ಈ `ಅಜ'ಕ್ಕೆ `ಪಿರಿಕಟ್ಟ್' ಮಾಡದೇ ಇದ್ದರೆ ಕುಟುಂಬಗಳ ಏಳಿಗೆಯೇ ಸಾಧ್ಯವಾಗದು ಎಂಬ ನಂಬಿಕೆ ತುಳುನಾಡಿನಲ್ಲಿ ಬಲವಾಗಿ ಬೇರೂರಿದೆ.
ಈ `ಆಜ-ಸೂಲ'ಗಳನ್ನು ಹಾಕಿ ಕೊಂಡವರು ಕೆಲವು ಸಮಯಗಳ ನಂತರ ಅದನ್ನು ಮರೆತು ಬಿಟ್ಟು ಮತ್ತೆ ಯಾವುದೋ ಸಂದರ್ಭದಲ್ಲಿ ಒಂದಾಗಿಬಿಡುವುದುಂಟು. ಆದರೆ ಅವರು ಮಾಡಿಕೊಂಡ ಆಜದ ದೋಷ ಅವರನ್ನು ಬಿಟ್ಟುಹೋಗುವುದಿಲ್ಲ. `ಮಾತು ಬಿಡ ಮಂಜುನಾಥ' ಎಂಬಂತೆ ಅವರಿಗೆ ಕೆಲವೊಂದು ದೋಷಗಳ ಅನುಭವವಾಗುತ್ತದೆ. ಈ ಬಗ್ಗೆ ಜ್ಯೋತಿಷ್ಯ, ಪ್ರಶ್ನೆ, ದೈವ ದರ್ಶನ ಮುಂತಾದ ಕಡೆ ಪರಿಮಾರ್ಜನೆಯನ್ನು ಕೇಳಿದಾಗ ಅವರು ಯಾವುದೋ ಕಾಲದಲ್ಲಿ ಹಾಕಿಕೊಂಡು ಮತ್ತೆ ಮರೆತುಬಿಟ್ಟ ಆಜ ಸೂಲದ ಬಗ್ಗೆ ನೆನಪು ಹುಟ್ಟುಸುವ ಪ್ರಮಾಣಗಳ ಕಂಡು ಬಂದು. ಕುಟುಂಬಗಳು ಮತ್ತೆ ಅದನ್ನು ನೆನಪಿಸಿಕೊಂಡಾಗ ಪ್ರಶ್ನೆಗಳು ಶ್ರೀಕ್ಷೇತ್ರಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ ದೈವದರ್ಶನದಲ್ಲಿ `ಮೂಡಾಯಿ ರಾಜ್ಯದ `ಆಜ' ತೀರಿಸುವ ಬಗ್ಗೆ ಅಪ್ಪಣೆ ನೀಡುತ್ತವೆ. ಮತ್ತೆ ಯಾವ ಕಾರಣಕ್ಕೂ ಈ ಕ್ಷೇತ್ರದ ಹೆಸರೆತ್ತಿ ವಿವಾದ ಸೃಷ್ಟಿಸಬೇಡಿ ಎಂದು ಕಟ್ಟಪ್ಪಣೆ ನೀಡುತ್ತದೆ. ದೈವ ದೇವರನ್ನು ನಂಬುವ ತುಳುವರು ಈ ಅಪ್ಪಣೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಧರ್ಮಸ್ಥಳಕ್ಕೆ ಹೋಗಿ ಧಮರ್ಾಧಿಕಾರಿಗಳ ದರ್ಶನ ಮಾಡಿ `ಆಜ ಪಿರಿಪ್ಪುನ' ವಿಧಿ ವಿಧಾನಗಳನ್ನು ಕೈಗೊಂಡು ಧಮರ್ಾಧಿಕಾರಿಗಳು `ನಿಕ್ಲೆನ ಆಜ ಪರಿಹಾರ ಆಂಡ್. ನನ ದುಂಬುಗು ವ್ಯಾಜ್ಯ ಮಲ್ತೊನೊಡ್ಚಿ' ಎಂದು ದೇವರ ಎದುರು ಹೇಳಿ ಆಶೀರ್ವದಿಸಿ ಬುದ್ದಿ ಮಾತು ಹೇಳಿ, ದೇವರ ದರ್ಶನ ಮಾಡಿಕೊಂಡು ಹೋಗಿ ಸಮರಸದಿಂದ ಸುಖವಾಗಿ ಬಾಳುವಂತೆ ಅದೇಶಿಸಿ ಕಳುಹಿಸಿಕೊಡುತ್ತಾರೆ.
ಇದು ಇಂದು ನಿನ್ನೆಯ ಪರಿಪಾಠವಲ್ಲ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಮತ್ತು ನಂಬಿಕೆ. ಇದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಂಡು ಕುಟುಂಬಗಳು ಮತ್ತೆ ಒಗ್ಗಟ್ಟಾಗಿ ತಮ್ಮ ತಮ್ಮ ಏಳಿಗೆಯನ್ನು ಕಂಡು ಕೊಳ್ಳುತ್ತವೆ. ವಾದ, ವಿವಾದ, ವ್ಯಾಜ್ಯ, ಜಗಳ ಇವೆಲ್ಲವುಗಳನ್ನು ಪೂರ್ವಜರಿಂದ ಬಳುವಳಿಯಾಗಿ ಪಡೆದುಕೊಂಡ ಕೆಲವು ಕುಟುಂಬಗಳು ಮತ್ತೆ ಮತ್ತೆ `ಆಜ -ಸೂಲ' ಗಳಿಗೆ ಒಳಗಾಗಿ ಅದನ್ನು ಪರಿಹರಿಸುವ ಚಾಳಿಯನ್ನು ಪ್ರದಶರ್ಿಸುವುದೂ ಉಂಟು. ಇಂತಹಾ ಕುಟುಂಬಗಳು ಅಧಃಪತನದತ್ತ ಸಾಗುತ್ತವೆ.
ತುಳುನಾಡಿನಲ್ಲಿ ಇಂತಹಾ ಸಂಪ್ರದಾಯವಿದ್ದರೆ ಕನರ್ಾಟಕದ ವಿವಿಧ ಭಾಗಗಳಲ್ಲಿ ಧರ್ಮಸ್ಥಳದ ಬಗ್ಗೆ ವಿಧ ವಿಧವಾದ ನಂಬಿಕೆಗಳಿವೆ. ಮಂಜುನಾಥ ಜಗದ್ವ್ಯಾಪಿ. ಈತನ ಹೆಸರಿನಲ್ಲಿ ನ್ಯಾಯ ನೀಡುವ ಧರ್ಮಸ್ಥಳವೂ ವಿಶ್ವವಿಖ್ಯಾತವಾಗಿದೆ. ಈ ಮಂಜುನಾಥನ ಪುಣ್ಯ ಕ್ಷೇತ್ರ ತುಳುನಾಡಿನಲ್ಲಿರುವುದು ತುಳುವರಿಗೆ ಹೆಮ್ಮೆಯ ವಿಚಾರವಾಗಿದೆ.
ಈ ಕ್ಷೇತ್ರದ ಆಜ-ಸೂಲ ಅಂದರೆ ಆಣೆ -ಪ್ರಮಾಣದ ವಿಚಾರವು ಈಗ ನಮ್ಮ ರಾಜ್ಯದ ರಾಜಕೀಯದ ವಲಯದಲ್ಲಿ ಪ್ರಮುಖ ಸುದ್ದಿಯಾಗಿಬಿಟ್ಟಿದೆ. ಮುಖ್ಯ ಮಂತ್ರಿ ಯಡಿಯೂಪ್ಪ ಮತ್ತು ಮಾಜೀ ಮುಖ್ಯಮಂತ್ರಿ ಈಗ ಈ ಕ್ಷೇತ್ರದ ಹೆಸರೆತ್ತಿ ಆಣೆ ಮಾಡಿಕೊಂಡು ಬಿಟ್ಟಿದ್ದಾರೆ. ಕ್ಷೇತ್ರವನ್ನು ಸಂದಶರ್ಿಸಿ ದೇವರ ಮುಂದೆ ಪರಿಹಾರ ಕೇಳುವುದೇ ಇದಕ್ಕೆ ಇರುವ ಪರಿಹಾರವಾಗಿದ್ದು ಬೇರೆ ಯಾವ ವಿಧಾನದಿಂದಲೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಮತ್ತು ದೇಶಾದ್ಯಂತ ಇವರಿಬ್ಬರ ನಡುವಿನ ಆಣೆ-ಪ್ರಮಾಣ ವಿವಾದವು ವಿವಿಧ ಊಹಾಪೋಹಗಳಿಗೆ ಎಡೆ ಮಾಡಿದ್ದರೂ ಇದು ಇವರ ವೈಯುಕ್ತಕ ವಿಚಾರವಾಗಿದೆ. ಇದಕ್ಕೂ ರಾಜ್ಯ ರಾಜಕಾರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ರಾಜ್ಯ ಸಂವಿಧಾನಬದ್ದವಾಗಿ ನಡೆದರೆ ಇವರ ವಾದ ವಿವಾದಗಳ ಪರಿಹಾರವು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ಇವರಿಬ್ಬರೂ ಒಂದಾಗಿ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಪರಸ್ಪರ ತಪ್ಪುಗಳನ್ನು ತಿದ್ದಿಕೊಂಡು ಇನ್ನು ಮುಂದೆ ಇಂತಹಾ ಆಣೆ - ಪ್ರಮಾಣಗಳಿಗೆ ಎಡೆ ಮಾಡುವಂತಹಾ ಹಗರಣಗಳನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿಕೊಳ್ಳುವ ಅಗತ್ಯವಿದೆ.
ಧಮರ್ಾಧಿಕಾರಿಗಳು ಎಲ್ಲಾ ವೈಮನಸ್ಸುಗಳನ್ನು ಮಂಜುನಾಥನ ಸನ್ನಿಧಿಯಲ್ಲೇ ಬಿಟ್ಟು ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂಬ ಬುದ್ದಿಯ ಮಾತುಗಳನ್ನು ಹೇಳುತ್ತಾರೆ. ಅದನ್ನು ಈರ್ವರೂ ಚಾಚೂ ತಪ್ಪದೆ ಪಾಲಿಸುತ್ತಾರೆ ಎಂಬ ಅಪೇಕ್ಷೆ ಮಂಜುನಾಥನನ್ನು ಮೈಮನಗಳಲ್ಲಿ ತುಂಬಿಕೊಂಡ ತುಳುವರದ್ದಾಗಿದೆ.

No comments:

Post a Comment