Monday, May 30, 2011

ತುಳುವರ ಪವಿತ್ರ `ಐನ್ ಪಣವು'ಗೆ ವಿದಾಯ



ನಾಲ್ಕಾಣೆಯ ಚಲಾ ವಣೆಯನ್ನು ಹಿಂತೆಗತದಿಂದ ತುಳುವರ `ನಾಲ್ಕಾಣೆ' ಕಾಣೆಯಾಗಿದೆ. ಈ ನಾಲ್ಕಾಣೆ ಇಲ್ಲದೇ ಹೋದ ಕಾರಣದಿಂದ ತುಳುವರು ತಾವು ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತಿ ಶ್ರದ್ದೆಯಿಂದ ಚಲಾಯಿಸುತ್ತಿದ್ದ `ಐನ್ ಪಣವಿ'ಗೆ ವಿದಾಯ ಹೇಳಬೇಕಾಗಿ ಬಂದಿದೆ.
ಒಂದು ಆಣೆ ಎಂದರೆ ಆರೂ ಕಾಲು ಪೈಸೆ ಎಂದು ಲೆಕ್ಕ ಹಾಕುತ್ತಿದ್ದ ತುಳುವರು ಇಂತಹಾ ನಾಲ್ಕು ಆಣೆಯನ್ನು ಸೇರಿಸಿ `ನಾಲ್ಕಾಣೆ' ಅಂದರೆ ಇಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು. ಇದೇ ರೀತಿ `ಎಣ್ಮಾಣೆ' ಅಂದರೆ ಐವತ್ತು ಪೈಸೆ ಮತ್ತು `ಪದ್ರಡಾಣೆ' ಅಂದರೆ ಎಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು ಒಂದು ರೂಪಾಯಿಯ ನಂತರ ಬರುವುದೇ `ಐನ್ ಪಣವು' ಅಂದರೆ ಐದು ನಾಲ್ಕಾಣೆಗಳು ಸೇರಿದ ಒಂದೂಕಾಲು ರೂಪಾಯಿ ತುಳುವರ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತೀ ಪವಿತ್ರ.
ತುಳುನಾಡಿನಲ್ಲಿ ಯಾವುದೇ ಧಾಮರ್ಿಕ ಕಾರ್ಯಕ್ರಮಗಳಲ್ಲೂ ಐನ್ ಪಣವು ಕಾಣಿಕೆಯನ್ನು ಇಡಲಾಗುತ್ತದೆ. ಒಂದು ಕಾಲದಲ್ಲಿ ಇದು ಗರಿಷ್ಠವಾಗಿದ್ದು ಈ ಕಾಲದಲ್ಲಿ ಇದು ಕನಿಷ್ಠವಾಗಿರಬಹುದು. ಆದರೆ ಈ ಐನ್ಪಣವು ಧಾಮರ್ಿಕವಾಗಿ ಸ್ವೀಕೃತವಾಗಿತ್ತು. ಧಾಮರ್ಿಕ ಕಾರ್ಯಕ್ರಮದ ಕೊನೆಯ ಭಾಗವಾಗಿ ಬ್ರಹ್ಮಾರ್ಪಣೆ `ಐನ್ ಪಣವಿ'ಗೆ ಹೂ ನೀರು ಹಾಕಿ ಬಿಡಬೇಕೆಂಬ ನಿಯಮವಿತ್ತು. ಇತ್ತೀಚೆಗೆ ಇದು ಐದು ಹತ್ತು ರೂಪಾಯಿಗಳಿಗೇರಿದ್ದರೂ ಒಂದೂ ಕಾಲು ರೂಪಾಯಿಯೇ ಪವಿತ್ರವಾದದ್ದು ಎಂಬ ಭಾವನೆ ಇತ್ತು.
ಪುರೋಹಿತರಿಗೆ ಕಾಣಿಕೆ, ತಾಂಬೂಲ ಇತ್ಯಾದಿಗಳನ್ನು ಕೊಡುವಾಗಲೂ ಎಷ್ಟೇ ದೊಡ್ಡ ಸಂಭಾವನೆಯ ನೋಟುಗಳನ್ನು ಇಟ್ಟರೂ ಅದರ ಜತೆಗೆ `ಐನ್ಪಣವು' ಇಟ್ಟರೇನೇ ಅದು ಸಾರ್ಥಕ ಎಂದು ಭಾವಿಸಲಾಗುತ್ತಿತ್ತು. ಡೊನೇಶನ್ ಇತ್ಯಾದಿಗಳನ್ನು ಕೊಡುವಾಗ ಕೊನೆಯಲ್ಲಿ ಸೊನ್ನೆ ಬರಬಾರದು ಎಂದು ಒಂದು ರೂಪಾಯಿ ಹೆಚ್ಚಾಗಿ ಕೊಡುವ ಕ್ರಮವೂ ಇದೇ ಆಧಾರದಲ್ಲಿ ಬಂದಿರಬೇಕು. ಒಂದು ಕಾಲು ಅಂದರೆ ಒಂದು ರೂಪಾಯಿ ಇಪ್ಪತೈದು ಪೈಸೆ ಅಂದರೆ ಕೊನೆಯ ಅಂಕೆ ಐದು ಆಗಿರುವುದರಿಂದಲೂ ಇದು ಮಂಗಲಕರವಾದದ್ದು ಎಂದು ಭಾವಿಸಲಾಗುತ್ತಿತ್ತು.
ಇನ್ನು ಮಂದಕ್ಕೆ ಮಂಗಲಕರ ಎಂದು ಭಾವಿಸಲಾಗಿದ್ದ ಈ ಸಂಖ್ಯೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ನಾಲ್ಕಾಣೆಯ ನಾಣ್ಯ ಮಾಯವಾಗಿಬಿಟ್ಟಿದೆ. ಜನರು ಆಥರ್ಿಕವಾಗಿ ಅಪಾರವಾದ ಅಭಿವೃದ್ಧಿ ಹೊಂದಿದ ಪರಿಣಾಮ ಬಹುಮುಖ್ಯವಾದ ಧಾಮರ್ಿಕ ಭಾವನೆಯೊಂದಕ್ಕೆ ಧಕ್ಕೆ ಬಂದೊದಗಿದೆ.
ಹಿಂದಿನ ಕಾಲದ ರುಯಿ, ಮುಕ್ಕಾಲು ಇತ್ಯಾದಿ ಲೆಕ್ಕದ ವಿಚಾರಗಳನ್ನು ಈಗ ಅರುವತ್ತು ವರ್ಷ ದಾಟಿದವರ ಬಾಯಲ್ಲಿ ಕೇಳಬಹುದಾಗಿದೆ. ಈಗ ಯುವಾವಸ್ಥೆಯನ್ನು ದಾಟುತ್ತಿರುವವರ ಬಾಲ್ಯದಲ್ಲಿ ರುಯಿ, ಮುಕ್ಕಾಲುಗಳು ಹಾಸ್ಯದ ಮತ್ತು ತಮಾಷೆ ಮಾಡುವ ನಾಣ್ಯಗಳಾಗಿದ್ದವು. ಇವರ ಬಾಲ್ಯ ಕಾಲದಲ್ಲಿ ಪೈಸೆಗಳದ್ದೇ ಕಾರುಬಾರು. ಇಂತಹಾ ಒಂದು ಪೈಸೆ, ಮೂರು ಪೈಸೆ, ಐದು ಪೈಸೆಗಳ ಚಲಾವಣೆ ಹಿಂತೆಗೆದುಕೊಳ್ಳುತ್ತದೆ ಎಂದು ಆ ಕಾಲದಲ್ಲಿ ಸುದ್ದಿಯಾದಾಗ ಈ ಪೈಸೆಗಳೆಲ್ಲಾ ಮಕ್ಕಳ ಕೈಗೆ ಸೇರಿ ಐಸ್ ಕ್ಯಾಂಡಿಯವನ ಡಬ್ಬ ಸೇರಿತ್ತು. ಹತ್ತು ಪೈಸೆ ಚಲಾವಣೆ ನಿಂತು ಹೋದದ್ದು ಇತ್ತೀಚಿನ ದಿನಗಳಲ್ಲಿ. ಹತ್ತು ಪೈಸೆ ಮತ್ತು ಅದರ ಕೆಳಗಿನ ಮೌಲ್ಯದ ನಾಣ್ಯಗಳು ನಾಣ್ಯ ಸಂಗ್ರಾಹಕರ ಬಳಿಯಲ್ಲಿ ನಾವೀಗ ಕಾಣಬಹುದಾಗಿದೆ. ನಾಲ್ಕಾಣೆಯ ಪಾವಲಿಗಳೂ ಅದೇ ದಾರಿಯನ್ನು ಹಿಡಿದಿದೆ. ಇನ್ನು ಮುಂದಿನ ಸರದಿ ಎಂಟಾಣೆ ಅಂದರೆ ಐವತ್ತು ಪೈಸೆಯದ್ದು. ಆದರೆ ಈ ನಾಣ್ಯ ನಾಲ್ಕಾಣೆಯಂತೆ ಧಾಮರ್ಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಾಮ ಬೀರದು.

1 comment:

  1. hmm.. nija yella ondondaagi kaaNeyaaguttide... eega naalkaaNe ello naa kaaNe

    ReplyDelete