Tuesday, May 31, 2011

ಎಲ್ಲವೂ ಅಸಲಿ; `ಅಪ್ಪೆ', `ದೈವ' ನಕಲಿ



ನಮ್ಮ ನಗರದ ಪ್ರತಿಷ್ಠಿತ ಜ್ಯೋತಿ ಚಿತ್ರಮಂದಿರದಲ್ಲಿ ಈಗ ಕಿಕ್ಕಿರಿದ ಜನಸಂದಣಿ. ಚಿತ್ರಮಂದಿರದ ಮೂಲಗಳು ಹೇಳುವಂತೆ ಕಳೆದ ವರ್ಷ ಬಂದ ವಿಷ್ಣುವರ್ಧನ್ರವರ ಆಪ್ತರಕ್ಷಕ ಚಿತ್ರದ ಬಳಿಕ ಚಿತ್ರಮಂದಿರದ ಮುಂದಿನ ಸಾಲಿನ ಸೀಟಿನ ಮೇಲೆ ಭಾರ ಬಿದ್ದದ್ದು ಮೊನ್ನೆ ಅಸಲ್ ಚಿತ್ರ ಬಿಡುಗಡೆಯಾದ ನಂತರ. ಟಿವಿ ಮುಂತಾದ ಮನರಂಜನೆಗಳು ವ್ಯಾಪಕವಾಗುವ ಮುನ್ನ ಸಿನಿಮಾ ಮಂದಿರಗಳು ತಮ್ಮ ದೌಲತ್ತನ್ನು ಪ್ರದಶರ್ಿಸುತ್ತಿದ್ದವು. ಟಿಕೇಟಿಗಾಗಿ ಹನುಮಂತನ ಬಾಲದಂತಹಾ ಸಾಲು. ನೂಕು ನುಗ್ಗಾಟ, ಗಲಾಟೆ, ಗಲಭೆಯನ್ನು ನಿಯಂತ್ರಿಸಲು ಪೊಲೀಸರ ಆಗಮನ, ಟಿಕೇಟನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುವ ಬ್ಲ್ಯಾಕ್ಟಿಕೇಟ್ ದಂಧೆ ಇತ್ಯಾದಿಗಳು ಆಗೆಲ್ಲಾ ಸಾಮಾನ್ಯವಾಗುತ್ತಿದ್ದವು. ಬರಬರುತ್ತಾ ನಮ್ಮ ತುಳುನಾಡಿನ ಚಿತ್ರ ಮಂದಿರಗಳಲ್ಲಿ ಹೊರರಾಜ್ಯದ ಪ್ರೇಕ್ಷಕರೇ ಜಾಸ್ತಿಯಾಗತೊಡಗಿದರು. ತುಳು ಮಾತನಾಡುವ ಮಂದಿ ಕನ್ನಡ ಸಿನೆಮಾಗಳ ವೀಕ್ಷಕರಾಗಿ ಹೋಗುವುದು ಬಹಳಷ್ಟು ಕಡಿಮೆಯಾಗತೊಡಗಿತು.
ಈಗ ಜ್ಯೋತಿ ಚಿತ್ರ ಮಂದಿರಕ್ಕೆ ಹೋದರೆ ನಮಗೆ ಆ ದಿನಗಳ ನೆನಪಾಗುತ್ತದೆ. ಎಲ್ಲಿ ನೋಡಿದರೂ ತುಳು ಬಿಟ್ಟು ಬೇರೆ ಭಾಷೆ ಮಾತನಾಡುವವರೇ ಇಲ್ಲ. ಅಂಕುಡೊಂಕು ಸಾಲು, ಪೊಲೀಸರ ಖಾಕಿ ಡ್ರೆಸ್ಸು, ಅಲ್ಲಲ್ಲಿ ನಾಲ್ಕೈದು ಪಟ್ಟು ಹೆಚ್ಚು ದುಡ್ಡಿಗೆ ಟಿಕೇಟ್ ಮಾರಾಟ ಮಾಡುವವರು. ಟಿಕೇಟೆಲ್ಲಾ ಖಾಲಿಯಾಗಿ `ಹೌಸ್ಫುಲ್' ಬೋಡರ್ು ಚಿತ್ರ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡಾಗ ಸಹನೆಗೆಟ್ಟು ಕೂಗಾಡುವ ಗಟ್ಟಿ ಮಾಂಸಖಂಡದ ಹುಡುಗರು. ಬೇಸರದಿಂದ ಚಿತ್ರಮಂದಿರದ ಆವರಣದಿಂದ ಹೊರಗೆ ಬಂದು ತಮ್ಮ ತಮ್ಮ ಪಾಡಿಗೆ ಹೋಗುವ ಮಂದಿ...
ಹೌದು ವಿಜಯಕುಮಾರ್ ಕೊಡಿಯಾಲ್ ಬೈಲ್ರವರ `ಒರಿಯದರ್ೊರಿ ಅಸಲ್' ತುಳು ಚಿತ್ರ ತುಳುನಾಡಿನಲ್ಲೇ ಒಂದು ಇತಿಹಾಸವನ್ನು ಬರೆದಿದೆ. ತುಳುನಾಡಿನಾದ್ಯಂತ ಈ ಚಿತ್ರದ ಪರವಾದ ಒಂದು ಅಲೆಯನ್ನು ನಿಮರ್ಾಣ ಮಾಡಿದೆ. ಈ ಚಿತ್ರವನ್ನು ಒಂದು ಬಾರಿ ನೋಡಬೇಕು ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಈ ಚಿತ್ರವನ್ನು ನೋಡಲೆಂದೇ ದುಬಾಯಿಯಿಂದ, ಮುಂಬಾಯಿಯಿಂದ ಬಂದವರಿದ್ದಾರೆ. ದೂರದ ಊರುಗಳಿಗೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಇನ್ನೂ ಕೂಡಾ ಚಿತ್ರ ನೋಡಲು ಅವಕಾಶ ಸಿಗದವರೂ ಇದ್ದಾರೆ. ಆಧುನಿಕ ಮನರಂಜನೆಗಳು ಸಾಕಷ್ಟು ಇರುವ ಈ ಕಾಲದಲ್ಲಿ ತುಳು ಚಿತ್ರವೊಂದು ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಕೈ ಬೀಸಿ ಕರೆಯುತ್ತಿರುವುದು ಒಂದು ವಿಸ್ಮಯವೇ ಸರಿ.
ತುಳುವರಿಗೆ ಸ್ಯಾಂಡಲ್ವುಡ್, ಬಾಲಿವುಡ್ ಗುಣಮಟ್ಟದ ಚಿತ್ರವೊಂದನ್ನು ನಿಮರ್ಿಸಲು ಸಾಧ್ಯವಿಲ್ಲ ಎಂಬ ಕೀಳರಿಮೆಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ರವರು ಮಂಗಳ ಹಾಡಿದ್ದಾರೆ. ತುಳು ಚಿತ್ರಕ್ಕೆ ಪ್ರೇಕ್ಷಕರು ಸಹಕಾರ ನೀಡುವುದಿಲ್ಲ ಎಂಬುದನ್ನೂ ತುಳುನಾಡಿನ ಪ್ರೇಕ್ಷಕರು ಹುಸಿಗೊಳಿಸಿದ್ದಾರೆ. ತುಳು ಚಿತ್ರರಂಗದ ಅಂಕುಡೊಂಕಿನ ರಸ್ತೆಯ ಅಂತಿಮ ಮೈಲಿಗಲ್ಲು ಇದು. ಮುಂದಿದೆ ನೇರ ಸಮತಟ್ಟಿನ ದಾರಿ.
ಈ ಚಿತ್ರ ಕೇವಲ ಹಾಸ್ಯದ ಕಾರಣದಿಂದಲೇ ಜನರ ಮನವನ್ನು ಸೆಳೆದಿದೆ ಎಂದರೆ ತಪ್ಪಾಗುತ್ತದೆ. ಮಧ್ಯಂತರದ ನಂತರ ಕತೆ ವಿಭಿನ್ನವಾಗಿ ಮೂಡಿ ಬಂದಿದೆ. ನಾಟಕದ ಒರಿಯದರ್ೊರಿ ಅಸಲ್ನಂತೆ ಚಿತ್ರ ಸಾಗುತ್ತದೆ ಎಂದು ಭಾವಿಸಿದವರಿಗೆ ತಾವು ತಪ್ಪಾಗಿ ಭಾವಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ. ತುಳುನಾಡಿನ ನೆಲ-ಜಲದ ಉಳಿವಿಗಾಗಿ ಅತೀ ಅಗತ್ಯವಾಗಿ ಬೇಕಾದ ಉತ್ತಮ ಸಂದೇಶವೂ ಈ ಚಿತ್ರದಲ್ಲಿ ಅಡಗಿದೆ. ಈ ಚಿತ್ರದ ಕತೆಯನ್ನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿ ಕಂಡು ಬರುವ ಒಂದು ಸಾಲಿನ ಕತೆಯಂತೆ ಹೇಳಿಬಿಡುಬಹುದು ಆದರೆ ಈ ಒಂದು ಸಾಲು ಚಿತ್ರಕತೆ ಎಂಬ ಪ್ರಾಣವಾಯುವಿನ ಸುತ್ತ ಹೆಣೆಯಲಾದ ಸುಂದರ ಶರೀರ ಮನಮುಟ್ಟುತ್ತದೆ.
ಹಾಗಾದರೆ ಈ ಚಿತ್ರದಲ್ಲಿ ಋಣಾತ್ಮಕವಾದ ಅಂಶಗಳು ಇಲ್ಲವೇ? ಇದೆ. ಖಂಡಿತವಾಗಿಯೂ ಇದೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ಚಿತ್ರಕ್ಕೊಂದು ಅಸಲಿ `ಅಪ್ಪೆ'ಯನ್ನು ಕೊಡಲು ವಿಜಯಣ್ಣ ವಿಫಲರಾಗಿದ್ದಾರೆ. ಖಡಕ್ ತುಳು ಮಾತನಾಡಿ ಮನಗೆಲ್ಲಬೇಕಾಗಿದ್ದ `ಅಪ್ಪೆ'ಯನ್ನು ಮುಂಬಾಯಿಯಿಂದ ಕರೆತಂದಂತಾಗಿದೆ. ಇಲ್ಲಿ ಕಾಪರ್ೋರೇಟರ್ ಕಾಂತಪ್ಪಣ್ಣನ ಹೆಂಡತಿ ಸ್ಟೈಲಾಗಿ ತುಳುವನ್ನು ಎಳೆದೆಳೆದು ಮಾತನಾಡುವುದನ್ನು ಸಹಿಸಿಕೊಳ್ಳಬಹುದಾಗಿದೆ. ನಾಯಕಿಯೂ ಆಧುನಿಕತೆಯ ಪ್ರಭಾವದಿಂದ ಮಾಡನರ್್ ತುಳು ಮಾತನಾಡುವುದನ್ನು ಒಪ್ಪಿಕೊಳ್ಳಬಹುದಾಗಿದೆ. ಆದರೆ ತುಳುನಾಡಿನ ಅಪ್ಪೆಗೆ ಸರಿಯಾಗಿ ತುಳು ಮಾತನಾಡಲು ಬಾರದೇ ಇರುವುದು ಒಂದು ಪ್ರಮುಖ ಕಪ್ಪು ಚುಕ್ಕೆಯಾಗಿದೆ. ಇದು ಒಂದು ಋಣಾತ್ಮಕ ಅಂಶವಾದರೆ ಇನ್ನೊಂದು ತುಳುನಾಡಿನ ಸಂಸ್ಕೃತಿಯ ದೃಷ್ಟಿಯಿಂದ ಬಹಳ ಮುಖ್ಯವೂ ಇನ್ನು ಮುಂದೆ ಸಿನಿಮಾ, ದೃಷ್ಯ ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಯನ್ನು ದಾಖಲಿಸುವಾಗ ಬಹಳಷ್ಟು ಜಾಗರೂಕತೆ ವಹಿಸಬೇಕಾದ ವಿಚಾರವೂ ಆಗಿದೆ. ಭೂತಾರಾಧನೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಸಿನಿಮಾದಲ್ಲಿ ತೋರಿಸುವಾಗ ಆಭಾಸವಾಗಿದೆ. ದೈವಪಾತ್ರಿಯ ಧ್ವನಿಯಂತೂ ಅಪಹಾಸ್ಯಕ್ಕೊಳಗಾದಂತಾಗಿದೆ. ನಾಟಕದಲ್ಲಿ ಇಂತಹುಗಳನ್ನು ಸಹಿಸಿಕೊಳ್ಳಬಹುದಾದರೂ ಸಿನಿಮಾದಲ್ಲಿ ಸಾಧ್ಯವಿಲ್ಲ. ಈ ದೃಷ್ಯವನ್ನು ಗಂಭೀರತೆಯೊಂದಿಗೆ ಅಳವಡಿಸಿಕೊಂಡಿದ್ದರೆ ಬಹುಶಃ ಇದೊಂದು ಚಿನ್ನದ ಗರಿಯಾಗುತ್ತಿತ್ತು. ಇಲ್ಲಿ ಬಸಪ್ಪಣ್ಣ ಮದ್ಯಪಾನ ವ್ಯಸನಿಯ ಸಂಕೇತವಾಗಿದ್ದರೆ, ದೈವ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರಬೇಕಾಗಿತ್ತು.
ಇವೆರಡಲು ಋಣಾತ್ಮಕ ಅಂಶಗಳನ್ನು ಬಿಟ್ಟರೆ ಉಳಿದ ಯಾವುದೇ ಹೇಳಿಕೊಳ್ಳುವಂತಹಾ ಹಿನ್ನಡೆಗಳು ಅಸಲಿಗಿಲ್ಲ. ಖಂಡಿತವಾಗಿಯೂ ಈ ಚಿತ್ರ ಎಲ್ಲಾ ರೀತಿಯಿಂದಲೂ ಸೂಪರ್ರಾಗಿದೆ. ಪ್ರತಿಯೋರ್ವರು ಸಂಸಾರ ಸಮೇತವಾಗಿ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವುದು ತುಳುವರ ಕರ್ತವ್ಯವಾಗಿದೆ.

1 comment:

  1. ee chitra bengalurinalli yelladru pradarshana idre hELi...

    ReplyDelete